ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಅ. 17 ರಂದು ದೇವು ಪೂಂಜ ಪ್ರತಾಪ ಯಕ್ಷಗಾನ ಬಯಲಾಟ

ಲೇಖಕರು : ಉದಯವಾಣಿ
ಗುರುವಾರ, ಒಕ್ಟೋಬರ್ 16 , 2014
ಒಕ್ಟೋಬರ್ 16, 2014

ಅ. 17 ರಂದು ದೇವು ಪೂಂಜ ಪ್ರತಾಪ ಯಕ್ಷಗಾನ ಬಯಲಾಟ

ಮುಂಬಯಿ : ಅಜೆಕಾರು ಕಮಾಭಿಮಾನಿ ಬಳಗ ಮುಂಬಯಿ ವತಿಯಿಂದ ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ಅವರ ವ್ಯವಸ್ಥಾಪನೆಯಲ್ಲಿ ದೇವು ಪೂಂಜ ಪ್ರತಾಪ ಯಕ್ಷಗಾನ ಬಯಲಾಟವು ಅ. 17 ರಂದು ಅಪರಾಹ್ನ 3.30 ರಿಂದ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಡಾ| ವಿಶ್ವೇಶ್ವರಯ್ಯ ಸಭಾಗೃಹದ ದಿ| ಚನ್ನಪ್ಪ ಶೆಟ್ಟಿ ವೇದಿಕೆಯಲ್ಲಿ ಜರಗಲಿದೆ.

ಸಮಾರಂಭದಲ್ಲಿ ಅಂಬಿಕಾ ಮಂದಿರ ವಿದ್ಯಾವಿಹಾರ್‌ ಇದರ ವಿದ್ವಾನ್‌ ಹರಿದಾಸ್‌ ಭಟ್‌ ಪೆರ್ಣಂಕಿಲ ಅವರು ಆಶೀರ್ವಚನ ನೀಡಲಿದ್ದಾರೆ. ಮುಂಬಯಿ ಉದ್ಯಮಿ ಪ್ರಕಾಶ್‌ ಭಟ್‌ ತೆಕ್ಕುಂಜ ಅವರು ಶುಭಾಶಂಸನೆಗೈಯಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ವಿಶ್ವ ಹಿಂದೂ ಪರಿಷತ್‌ ಮುಂಬಯಿ ಘಟಕದ ಉಮೇಶ್‌ ಶೆಟ್ಟಿ ಪೊಲ್ಯ, ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಹೊಟೇಲ್‌ ಉದ್ಯಮಿ ಬಾಬು ಶೆಟ್ಟಿ ಪೆರಾರ, ಥಾಣೆ ಉದ್ಯಮಿ ಆನಂದ ಎನ್‌. ಶೆಟ್ಟಿ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್‌ ಶೆಟ್ಟಿ ಐಕಳ, ಯಕ್ಷ ಮಾನಸ ಮುಂಬಯಿ ಅಧ್ಯಕ್ಷ ಶೇಖರ ಶೆಟ್ಟಿ ಇನ್ನಾ, ವೆಲ್‌ಕಂ ಪ್ಯಾಕೇಜ್‌ ಇಂಡಸ್ಟಿÅàಸ್‌ ಮುಂಬಯಿ ಇದರ ರವೀಂದ್ರ ಭಂಡಾರಿ, ಟ್ಯಾಕ್ಸ್‌ ಕನ್ಸಲ್ಟಂಟ್‌ ಪ್ರವೀಣ್‌ ಬಿ. ಶೆಟ್ಟಿ ಎಲ್ಲೂರು, ಡೊಂಬಿವಲಿ ಉದ್ಯಮಿ ಕಲ್ಲಡ್ಕ ಕರುಣಾಕರ ಶೆಟ್ಟಿ, ರಜಕ ಸಂಘ ವಸಾಯಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ದೇವೇಂದ್ರ ಬುನ್ನನ್‌, ಬಂಟ ಯಕ್ಷಕಲಾ ವೇದಿಕೆ ಮುಂಬಯಿ ಸಂಯೋಜಕ ದಾಮೋದರ ಶೆಟ್ಟಿ ಇರುವೈಲು, ಚೆಂಬೂರು ಉದ್ಯಮಿ ಕುಡಾಲುಗುತ್ತು ಗಣೇಶ್‌ ರೈ ಅವರು ಆಗಮಿಸಲಿದ್ದಾರೆ.

ಮುಂಬಯಿ ಕಲಾಸಂಘಟಕ ಕರ್ನೂರು ಮೋಹನ್‌ ರೈ ಅವರು ಅಭಿನಂದನಾ ಭಾಷಣಗೈಯಲಿದ್ದಾರೆ. ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ರಂಗನಟ ಅಶೋಕ್‌ ಪಕ್ಕಳ ಅವರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಜೆಕಾರು ಅವರು ವಂದಿಸಲಿದ್ದಾರೆ.

ಸಮಾರಂಭದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರುಗಳಾದ ರಾಜ್ಯ ಪ್ರಶಸ್ತಿ ವಿಜೇತ ಅರುವ ಕೊರಗಪ್ಪ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ್‌ ಶೆಟ್ಟಿ ಸರಪಾಡಿ, ಮಧೂರು ರಾಧಾಕೃಷ್ಣ ನಾವಡ, ಸದಾಶಿವ ಕುಲಾಲ್‌ ವೇಣೂರು, ಜಗನ್ನಾಥ ಶೆಟ್ಟಿ ಪೆರ್ಲ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಗುವುದು. ಕಾರ್ಯಕ್ರಮದ ಪ್ರಾಯೋಜಕರಾಗಿ ಬಾಬು ಶೆಟ್ಟಿ ಪೆರಾರ, ಆನಂದ ಎಂ. ಶೆಟ್ಟಿ ಬೊಳ್ಳಾರುಗುತ್ತು, ಗಣೇಶ್‌ ಶೆಟ್ಟಿ ಐಕಳ, ಕಲ್ಲಡ್ಕ ಕರುಣಾಕರ ಶೆಟ್ಟಿ ಅವರು ಸಹಕರಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ನಡೆಯಲಿರುವ ದೇವು ಪೂಂಜ ಪ್ರತಾಪ ತುಳು ಯಕ್ಷಗಾನ ಬಯಲಾಟದಲ್ಲಿ ಅತಿಥಿ ಭಾಗವತರಾಗಿ ಗಾನಗಂಧರ್ವ ಸತೀಶ್‌ ಶೆಟ್ಟಿ ಪಟ್ಲ, ಗಿರೀಶ್‌ ರೈ ಕಕ್ಕೆಪದವು, ಸತೀಶ್‌ ಶೆಟ್ಟಿ ಬೊಂದೆಲ್‌, ಚೆಂಡೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು, ಚಂದ್ರಶೇಖರ ಗುರುವಾಯನಕೆರೆ, ಆನಂದ ಶೆಟ್ಟಿ ಇನ್ನ ಅವರು ಪಾಲ್ಗೊಳ್ಳಲಿದ್ದಾರೆ. ಸ್ತಿÅà ಪಾತ್ರದಲ್ಲಿ ಸಂಜಯ್‌ಕುಮಾರ್‌ ಶೆಟ್ಟಿ ಗೋಣಿಬೀಡು, ನೆಲ್ಯಾಡಿ ಪ್ರಶಾಂತ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ಪಡ್ರೆ, ಹಾಸ್ಯದಲ್ಲಿ ಕಡಬ ದಿನೇಶ್‌ ರೈ, ಚಕ್ರತಾಳದಲ್ಲಿ ಪುರುಷೋತ್ತಮ ಆಚಾರ್ಯ ಅವರು ಪಾಲ್ಗೊಳ್ಳಲಿದ್ದಾರೆ.

ಕಲಾವಿದರುಗಳಾಗಿ ಅರುವ ಕೊರಗಪ್ಪ ಶೆಟ್ಟಿ, ಅಶೋಕ್‌ ಶೆಟ್ಟಿ ಸರಪಾಡಿ, ಮಧೂರು ರಾಧಾಕೃಷ್ಣ ನಾವಡ, ಸದಾಶಿವ ಕುಲಾಲ್‌ ವೇಣೂರು, ಶಶಿಕಿರಣ್‌ ಕಾವೂರು, ವಿಶ್ವನಾಥ ಎಡನೀರು, ಶಿವಕುಮಾರ್‌ ಮೂಡಬಿದ್ರೆ, ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ಜಗನ್ನಾಥ ಶೆಟ್ಟಿ ಪೆರ್ಲ, ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ, ಸಂತೋಷ್‌ ಎಡನೀರು ಹಾಗೂ ವೇಷಭೂಷಣದಲ್ಲಿ ರಾಕೇಶ್‌ ಮಲ್ಯ ಅವರು ಸಹಕರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.



ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ